ಮಿಚೆಲ್ ಸ್ಟಾರ್ಕ್ ಜನವರಿ 30ರಂದು ಜನ್ಮದಿನ ಆಚರಿಸಿದರು

ಮಿಚೆಲ್ ಸ್ಟಾರ್ಕ್ ಜನವರಿ 30ರಂದು ಜನ್ಮದಿನ ಆಚರಿಸಿದರು

ಆಸ್ಟ್ರೇಲಿಯಾದ ಪ್ರಮುಖ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಜನವರಿ 30ರಂದು ತಮ್ಮ ಜನ್ಮದಿನವನ್ನು ಆಚರಿಸಿದರು. 1990ರಲ್ಲಿ ಸಿಡ್ನಿಯ ಬಾಲ್ಕಮ್ ಹಿಲ್ಸ್ ಪ್ರದೇಶದಲ್ಲಿ ಅವರು ಜನಿಸಿದ್ದರು. ಸ್ಟಾರ್ಕ್ ಆಸ್ಟ್ರೇಲಿಯಾ ತಂಡದ ಪ್ರಮುಖ ಫಾಸ್ಟ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಬಾಲ್ಯದಿಂದಲೇ ಕ್ರಿಕೆಟ್ ಮೇಲೆ ಆಸಕ್ತಿ ಹೊಂದಿದ್ದ ಸ್ಟಾರ್ಕ್ ಮೂರು ಫಾರ್ಮಾಟ್‌ಗಳಲ್ಲಿ ಆಸ್ಟ್ರೇಲಿಯಾ ಪರವಾಗಿ ಆಡಿದ್ದಾರೆ. ಹಲವಾರು ಐಸಿಸಿ ಟೂರ್ನಮೆಂಟ್‌ಗಳಲ್ಲಿ ತಂಡದ ಯಶಸ್ಸಿಗೆ ಅವರು ಪಾತ್ರವಹಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಮಿಚೆಲ್ ಸ್ಟಾರ್ಕ್ ಅವರ ಒಟ್ಟು ನಿಕರ ಆಸ್ತಿ ಮೌಲ್ಯ ಸುಮಾರು ರೂ.208 ಕೋಟಿ ಎಂದು ಅಂದಾಜಿಸಲಾಗಿದೆ. ಅವರ ಪ್ರಮುಖ ಆದಾಯ ಕ್ರಿಕೆಟ್‌ನಿಂದ ಬರುತ್ತದೆ. ಇದರ ಜೊತೆಗೆ ಜಾಹೀರಾತುಗಳು, ಬ್ರ್ಯಾಂಡ್ ಎಂಡೋರ್ಸ್ಮೆಂಟ್‌ಗಳು ಹಾಗೂ ರಿಯಲ್ ಎಸ್ಟೇಟ್ ಹೂಡಿಕೆಗಳಿಂದಲೂ ಆದಾಯ ಹೊಂದಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾದಿಂದ ವಾರ್ಷಿಕ ಕೇಂದ್ರ ಒಪ್ಪಂದವನ್ನು ಅವರು ಪಡೆಯುತ್ತಾರೆ. ಬಿಗ್ ಬ್ಯಾಶ್ ಲೀಗ್ ಸೇರಿದಂತೆ ಇತರೆ ಅಂತಾರಾಷ್ಟ್ರೀಯ ಟೂರ್ನಮೆಂಟ್‌ಗಳಿಂದಲೂ ಅವರು ಆದಾಯ ಗಳಿಸುತ್ತಾರೆ.

2023ರಲ್ಲಿ ಸಿಡ್ನಿಯ ಟೆರ್ರಿ ಹಿಲ್ಸ್ ಪ್ರದೇಶದಲ್ಲಿ ಸ್ಟಾರ್ಕ್ ಒಂದು ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದರು. ಅದರ ಮೌಲ್ಯ ಸುಮಾರು 24 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಎಂದು ತಿಳಿಸಲಾಗಿದೆ, ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ.138 ಕೋಟಿಗೆ ಸಮಾನವಾಗಿದೆ. ಇದಕ್ಕೂ ಮೊದಲು ತಮ್ಮ ಹಳೆಯ ಮನೆವನ್ನು ಸುಮಾರು ರೂ.46 ಕೋಟಿಗೆ ಮಾರಾಟ ಮಾಡಿದ್ದರು.

ಸ್ಟಾರ್ಕ್ ಅವರ ಕಾರು ಸಂಗ್ರಹದಲ್ಲಿ ಲ್ಯಾಂಬೋರ್ಗಿನಿ ಹುರಾಕಾನ್ ಎವೋ, ಜಾಗ್ವಾರ್ ಎಫ್-ಟೈಪ್, ಆಡಿ ಎಸ್‌ಕ್ಯೂ7 ಮತ್ತು ಮರ್ಸಿಡಿಸ್-ಬೆನ್ಸ್ ಜಿ-ಕ್ಲಾಸ್ ಸೇರಿವೆ.

ಮಿಚೆಲ್ ಸ್ಟಾರ್ಕ್ ಅವರ ಪತ್ನಿ ಅಲಿಸಾ ಹೀಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿಯಾಗಿದ್ದರು ಮತ್ತು ವಿಶ್ವದ ಪ್ರಮುಖ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ.

Leave a comment