ದಶರಥರಿಗೆ ಈ ಮೊಬೈಲ್ ಮಾರ್ಚ್ 21ರ ರಾತ್ರಿ ಸಿಕ್ಕಿತ್ತು. ಅವರು ತಮ್ಮ ಕೆಲಸ ಮುಗಿಸಿ ನಾಲ್ಕನೇ ಪ್ಲಾಟ್‌ಫಾರ್ಮ್‌ನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರಿಗೆ ಆ ಮೊಬೈಲ್ ಕಾಣಿಸಿತು.
ಪೊಲೀಸರ ತನಿಖೆಯಲ್ಲಿ ಈ ಫೋನ್ ಅಮಿತಾಭ್ ಬಚ್ಚನ್ ಅವರ ಮೇಕಪ್ ಆರ್ಟಿಸ್ಟ್ ದೀಪಕ್ ಸಾವಂತ್ ಅವರದ್ದೆಂದು ತಿಳಿದುಬಂದಿದೆ. ದೀಪಕ್ ಸಾವಂತ್ ಅವರ ಕುಟುಂಬದವರನ್ನು ಸಂಪರ್ಕಿಸಲಾಯಿತು. ದಶರಥನ ಪ್ರಾಮಾಣಿಕತೆಗೆ ಮೆಚ್ಚಿ, ಮೊಬೈಲ್ ಫೋನ್‌ನ ಮಾಲೀಕರು ಅವರಿಗೆ ಸಾವಿರ ರೂಪಾಯಿ ಬಹುಮಾನ ನೀಡಿದರು.
ದಾದರ್ ರೈಲ್ವೆ ನಿಲ್ದಾಣದಲ್ಲಿ ದಶರಥ ದೌಂಡ್ ಪ್ರತಿನಿತ್ಯ ೩೦೦ ರೂಪಾಯಿಗಳನ್ನು ಗಳಿಸುತ್ತಾರೆ. ಹೀಗಿರುವಾಗ, ಅವರ ಮುಂದೆ ಒಂದೂವರೆ ಲಕ್ಷ ರೂಪಾಯಿ ಬೆಲೆಯ ಫೋನ್ ಕಾಣಿಸಿಕೊಂಡರೆ, ಕೆಲ ಕ್ಷಣಗಳ ಕಾಲ ಅವರ ಕಣ್ಣುಗಳು ಖಂಡಿತವಾಗಿಯೂ ಹೊಳೆಯಬಹುದು.
ಒಬ್ಬ ಕುಲಿ ಅದನ್ನು ಕಂಡು ಪೊಲೀಸರಿಗೆ ಒಪ್ಪಿಸಿದರು. ನಂತರ ಆ ಮೊಬೈಲ್ ಅಮಿತಾಬ್ ಬಚ್ಚನ್ ಅವರ ಮೇಕಪ್ ಆರ್ಟಿಸ್ಟ್‌ರದ್ದೆಂದು ತಿಳಿದುಬಂದಿದೆ.