ಮಾಧ್ಯಮ ವರದಿಗಳ ಪ್ರಕಾರ, ಅಗಮ್ ಕುಮಾರ್ ನಿಗಮ್ ರವಿವಾರ ವರ್ಸೋವಾ ಪ್ರದೇಶದಲ್ಲಿ ನಿಕಿತಾ ಅವರ ಮನೆಗೆ ಊಟಕ್ಕೆ ಹೋಗಿದ್ದರು. ಕೆಲವು ಸಮಯದ ನಂತರ ಅವರು ಮರಳಿದಾಗ, ಮರದ ಅಲಮಾರೆಯಲ್ಲಿಟ್ಟಿದ್ದ ಡಿಜಿಟಲ್ ಲಾಕರ್‌ನಿಂದ ೪೦ ಲಕ್ಷ ರೂಪಾಯಿಗಳು ಕಳವಾಗಿದೆ ಎಂದು ತಮ್ಮ ಮಗಳಿಗೆ ಫೋನ್‌ನಲ್ಲಿ ತಿಳಿಸಿದರು.
ಸೋನು ನಿಗಂ ಅವರ ಅಕ್ಕ ನಿಕಿತಾ ಅವರ ಪ್ರಕಾರ, ಅವರ ತಂದೆಗೆ ಸುಮಾರು ೮ ತಿಂಗಳಿಂದ ರೇಹಾನ್ ಎಂಬ ಚಾಲಕ ಇದ್ದರು. ಆದರೆ, ಅವರ ಕೆಲಸದ ಬಗ್ಗೆ ಹಲವು ದೂರುಗಳು ಬಂದಿದ್ದವು.
ಮಾಧ್ಯಮ ವರದಿಗಳ ಪ್ರಕಾರ, ಗಾಯಕ ಸೋನು ನಿಗಮ್ ಅವರ ತಂದೆ ತಮ್ಮ ಹಿಂದಿನ ಚಾಲಕನ ಮೇಲೆ ಮನೆಯಿಂದ 72 ಲಕ್ಷ ರೂಪಾಯಿಗಳನ್ನು ಕಳವು ಮಾಡಿದ ಆರೋಪ ಹೊರಿಸಿ ಬುಧವಾರ ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಒಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಮಾಜಿ ಚಾಲಕ ರೇಹಾನ್ ಅವರನ್ನು ಬಂಧಿಸಲಾಗಿದೆ. ಕೆಲವು ದಿನಗಳ ಹಿಂದೆ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.