ಇತ್ತೀಚೆಗೆ ಅವರ ಒಂದು ವರ್ಕೌಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಅವರು ತೀವ್ರ ವ್ಯಾಯಾಮ ಮಾಡುತ್ತಿರುವುದು ಕಾಣುತ್ತದೆ. ಬ್ಲ್ಯಾಕ್ ಟಾಪ್ ಮತ್ತು ಬ್ಲ್ಯಾಕ್ ಶಾರ್ಟ್ಸ್ ಧರಿಸಿ ಅವರು ವ್ಯಾಯಾಮ ಮಾಡುತ್ತಿದ್ದಾರೆ.
ಚಿತ್ರದ ಬಿಡುಗಡೆಯನ್ನು ಗಮನಿಸಿದರೆ, 'ಎನ್‌ಟಿಆರ್ 30' ಮುಂದಿನ ವರ್ಷ ಮಾರ್ಚ್ 5, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ಜೂನಿಯರ್ ಎನ್ಟಿಆರ್ ಅವರ ಮೊದಲ ಸೋಲೋ ಪ್ಯಾನ್ ಇಂಡಿಯಾ ಚಿತ್ರವಾಗಿದೆ.
ಜಾನವಿ ಕಪೂರ್ ಶೀಘ್ರದಲ್ಲೇ ಜೂನಿಯರ್ ಎನ್ಟಿಆರ್ ಅವರ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಚಿತ್ರದ ಪೋಸ್ಟರ್ ಅನ್ನು ಜಾನವಿ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಫಿಟ್‌ನೆಸ್‌ಗಾಗಿ ಜಿಮ್‌ನಲ್ಲಿ ಶ್ರಮದಾಯಕ ವ್ಯಾಯಾಮ; ವೀಡಿಯೋ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.