ಆ ಅದ್ಭುತ ಪ್ರದರ್ಶನದ ನಂತರ ನನ್ನ ಕೌಶಲಕ್ಕೆ ರೆಕ್ಕೆಗಳು ಬಂದಂತಾಯಿತು. ಅದಾದ ನಂತರ ನಾನು ಐಐಟಿ ದೆಹಲಿ ಶಾಸ್ತ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತೆಯಾದೆ.
2004ನೇ ಇಸವಿಯ ನೆನಪು. ಆಗ ನನಗೆ ಕೇವಲ 10 ವರ್ಷ. ಆ ಸಮಯದಲ್ಲಿ ನನ್ನನ್ನು ಪ್ರಧಾನಮಂತ್ರಿಯವರ ಮುಂದೆ ಪ್ರದರ್ಶನ ನೀಡುವಂತೆ ಕೇಳಲಾಯಿತು. ಆಗ ನಮ್ಮ ದೇಶದ ಪ್ರಧಾನಮಂತ್ರಿಗಳಾಗಿದ್ದವರು ಡಾ. ಮನಮೋಹನ್ ಸಿಂಗ್ ಅವರು.
ಕಳೆದ ಏಳು ವರ್ಷಗಳಿಂದ ರಶ್ಮಿತ್ ಮುಂಬೈನಲ್ಲಿ ಒಂಟಿಯಾಗಿ ಹೋರಾಡುತ್ತಾ, ಹೊಸ ಮೈಲಿಗಲ್ಲು ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.
ಹತ್ತು ವರ್ಷದ ವಯಸ್ಸಿನಲ್ಲಿ ಪ್ರಧಾನಮಂತ್ರಿಯವರ ಮುಂದೆ ಗುರುವಾಣಿ ಹಾಡಿದವರು, 'ಬಾಜ್ರೆಯ ಸಿಟ್ಟ'ದಿಂದ ಪ್ರಸಿದ್ಧರಾದವರು, ಇದೀಗ ತಮ್ಮ 'ತಕದೀರ್' ಅನ್ನು ತೆರೆದಿಟ್ಟಿದ್ದಾರೆ.