2004ರಲ್ಲಿ ಪಂಕಜ್ ಅವರು ಒಂದು ಟಾಟಾ ಟೀ ಜಾಹೀರಾತಿನಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು.
ನಟನೆಯಲ್ಲಿ ಭವಿಷ್ಯವಿದೆಯೋ ಇಲ್ಲವೋ ಎಂಬ ಆತಂಕದಿಂದಾಗಿ, ಪಂಕಜ್ ಪಟ್ನಾದ ಐದು ನಕ್ಷತ್ರ ಹೋಟೆಲೊಂದರಲ್ಲಿ ಕೆಲಸ ಮಾಡಲು ಆರಂಭಿಸಿದರು.
ಪಂಕಜ್ ತ್ರಿಪಾಠಿ 12ನೇ ತರಗತಿಯ ನಂತರ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಲು ಪಟ್ನಾಕ್ಕೆ ಹೋದರು. ಆದರೆ ಅವರಲ್ಲಿ ಅಭಿನಯದ ಪ್ರತಿಭೆ ಆರಂಭದಿಂದಲೂ ಇತ್ತು.
ಕೆರಿಯರ್‌ನಲ್ಲಿ ಅವರು ‘ಗ್ಯಾಂಗ್ಸ್ ಆಫ್ ವಾಸೇಪುರ್’, ‘ಫುಕ್ರೆ’, ‘ಮಸಾನ್’, ‘ಬರೇಲಿ ಕಿ ಬರ್ಫಿ’, ‘ಎಕ್ಸ್‌ಟ್ರಾಕ್ಷನ್’, ‘ಸ್ತ್ರೀ’, ‘ಲೂಕಾ ಚುಪ್ಪಿ’, ‘ಕಾಗಜ್’ ಮತ್ತು ‘ಮಿಮ್ಮಿ’ ಮುಂತಾದ ಅನೇಕ ಉತ್ತಮ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.