ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಭಾರತದಲ್ಲೇ ಈ ಏಕದಿನ ವಿಶ್ವಕಪ್ ನಡೆಯಲಿದೆ. ಕೊನೆಯ ವಿಶ್ವಕಪ್ ಅನ್ನು ತನ್ನದೇ ದೇಶದಲ್ಲಿ ಭಾರತ ತಂಡ ಗೆದ್ದುಕೊಂಡಿತ್ತು.
ಈ ಟೂರ್ನಮೆಂಟ್ 46 ದಿನಗಳವರೆಗೆ ನಡೆಯಲಿದ್ದು, ಮೂರು ನಾಕೌಟ್ ಪಂದ್ಯಗಳನ್ನು ಒಳಗೊಂಡಂತೆ ಒಟ್ಟು 48 ಪಂದ್ಯಗಳು ನಡೆಯಲಿವೆ. ಈ ಬಾರಿಯ ವಿಶ್ವಕಪ್‌ನಲ್ಲಿ 10 ತಂಡಗಳು ಭಾಗವಹಿಸುತ್ತಿವೆ.
ಭಾರತ ಮೊದಲ ಬಾರಿಗೆ ವಿಶ್ವಕಪ್‌ನ ಸಂಪೂರ್ಣ ಆತಿಥ್ಯ ವಹಿಸುತ್ತಿದೆ. ಇದಕ್ಕೂ ಮೊದಲು, ಭಾರತ ತನ್ನ ಪಕ್ಕದ ರಾಷ್ಟ್ರಗಳೊಂದಿಗೆ ಸೇರಿ ಈ ದೊಡ್ಡ ಟೂರ್ನಮೆಂಟ್‌ಗೆ ಆತಿಥ್ಯ ನೀಡಿತ್ತು.
ಮೊದಲ ಬಾರಿಗೆ ಭಾರತದ ಸಂಪೂರ್ಣ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ನ ದಿನಾಂಕಗಳು ಬಹಿರಂಗಗೊಂಡಿವೆ. ಭಾರತದ 12 ನಗರಗಳಲ್ಲಿ ಈ ಪಂದ್ಯಗಳು ನಡೆಯಲಿವೆ.