ಇದಕ್ಕೂ ಮುನ್ನ ಕಾಮನ್‌ವೆಲ್ತ್ ಆಟಗಳ ಚಾಂಪಿಯನ್ ನೀತು ಘಂಗಾಸ್ (೪೮ ಕಿಲೋ) ಮತ್ತು ಸ್ವೀಟಿ ಬುರಾ (೮೧ ಕಿಲೋ) ಮಹಿಳಾ ಸೆಮಿಫೈನಲ್ ತಲುಪಿ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ.

ಆರ್‌ಎಸ್‌ಸಿ (ರೆಫರಿಯಿಂದ ಹೋರಾಟವನ್ನು ನಿಲ್ಲಿಸುವುದು) ಆಧಾರದ ಮೇಲೆ ಜಪಾನಿನ ಮಾಡೋಕಾ ವಾದಾ ಅವರನ್ನು ನೀತು ಘಂಗಾಸ್ ಸೋಲಿಸಿದರು. ಅದೇ ರೀತಿ ಸ್ವೀಟಿ ಬುರಾ ಬಲ್ಗೇರಿಯಾದ ವಿಕಟೋರಿಯಾ ಕೆಬಿಕವಾ ಅವರನ್ನು ಸೋಲಿಸಿದರು.

2022ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದರು

ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರಿಂದ ಭಾರತಕ್ಕೆ ಮೂರು ಪದಕಗಳು ಖಚಿತವಾಗಿವೆ.

ಭಾರತೀಯ ತಾರಾ ಮುಷ್ಟಿಯೋಧಿ ನಿಖತ್ ಜರಿನ್ ಅವರ ಅದ್ಭುತ ಪ್ರದರ್ಶನ

50 ಕೆಜಿ ವಿಭಾಗದಲ್ಲಿ, ಥೈಲ್ಯಾಂಡ್‌ನ ರಕ್ಷತ್ ಚೂಥಮೆತ್ ಅವರನ್ನು ಸೋಲಿಸುವ ಮೂಲಕ ನಿಖತ್ ಅವರು ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಇದರೊಂದಿಗೆ, ವಿಶ್ವ ಮುಷ್ಟಿಯೋಧನಾ ಚಾಂಪಿಯನ್‌ಷಿಪ್‌ನಲ್ಲಿ ನಿಖತ್ ಅವರಿಗೆ ಎರಡನೇ ಪದಕ ಖಚಿತವಾಗಿದೆ.

ವಿಶ್ವ ಬಾಕ್ಸಿಂಗ್‌ನಲ್ಲಿ ನಿಖತ್ ಜರಿನ್‌ರಿಂದ ಎರಡನೇ ಪದಕ ಖಚಿತ

ನೀತು ಮತ್ತು ಸ್ವೀಟಿ ಕೂಡ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆದಿದ್ದು, ಭಾರತಕ್ಕೆ ಮೂರು ಪದಕಗಳು ಖಚಿತವಾಗಿವೆ.

Next Story