ಬಿಸ್ಮಾಹ್ ಮಾರುಫ್ ತಮಗಾ-ಎ-ಇಮ್ತಿಯಾಜ್ ಪುರಸ್ಕಾರಕ್ಕೆ ಭಾಜನಳಾದ ಎರಡನೇ ಮಹಿಳಾ ಕ್ರಿಕೆಟರ್ ಆಗಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನದ ಮಾಜಿ ಕ್ರಿಕೆಟರ್ ಮತ್ತು ನಾಯಕಿ ಸನಾ ಮೀರ್ ಈ ಪ್ರಶಸ್ತಿಯನ್ನು ಪಡೆದಿದ್ದರು. 31 ವರ್ಷದ ಮಾರುಫ್ ಅವರು ಈ ಪ್ರಶಸ್ತಿಯನ್ನು ತಮ್ಮ ತಂದೆಗೆ ಅರ್ಪಿಸಿದ್ದಾರೆ.
ಪಾಕಿಸ್ತಾನ ಸರ್ಕಾರವು ಆಗಸ್ಟ್ 14, ಸ್ವಾತಂತ್ರ್ಯ ದಿನದಂದು ಬಾಬರ್ ಅವರಿಗೆ ಸಿತಾರ-ಎ-ಇಮ್ತಿಯಾಜ್ ಪ್ರಶಸ್ತಿ ನೀಡುವುದಾಗಿ ಘೋಷಿಸಿತ್ತು. ಈ ಪ್ರಶಸ್ತಿ ಪಡೆದ ಅನೇಕ ಹಿರಿಯ ಕ್ರಿಕೆಟ್ ಆಟಗಾರರ ಸಾಲಿಗೆ ಅವರು ಸೇರಿದ್ದಾರೆ.
ಬಾಬರ್ ಆಜಮ್ ಅವರಿಗೆ ಪ್ರಶಸ್ತಿ ಲಭಿಸಿದ ಬಳಿಕ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಪದಕದೊಂದಿಗೆ ತಮ್ಮ ಫೋಟೋವನ್ನು ಹಂಚಿಕೊಂಡು, "ನನ್ನ ತಾಯಿ ಮತ್ತು ತಂದೆಯವರ ಸಮ್ಮುಖದಲ್ಲಿ ಸಿತಾರ-ಎ-ಇಮ್ತಿಯಾಜ್ ಪ್ರಶಸ್ತಿ ಪಡೆಯುವುದು ನನಗೆ ಅಪಾರ ಗೌರವದ ವಿಷಯವಾಗಿದೆ" ಎಂದು ಬರೆದಿದ್ದಾರೆ.
ಪಾಕಿಸ್ತಾನದಲ್ಲಿ ಮೂರನೇ ಅತಿ ದೊಡ್ಡ ನಾಗರಿಕ ಗೌರವ ಪಡೆದ ಅತ್ಯಂತ ಯುವ ವ್ಯಕ್ತಿಯಾಗಿ ಬಾಬರ್ ಆಜಮ್ ಅವರು ಹೊರಹೊಮ್ಮಿದ್ದಾರೆ.