ಶಾರ್ಟ್‌ರವರಿಗೆ ಇದು ಅವರ ಮೊದಲ IPL ಅನುಭವವಾಗಲಿದೆ. ಇತ್ತೀಚೆಗೆ ನಡೆದ ಬಿಗ್ ಬ್ಯಾಶ್ ಲೀಗ್‌ನಲ್ಲಿ ಅವರು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿದ್ದರು.
ಸೆಪ್ಟೆಂಬರ್ 2022 ರಲ್ಲಿ, ಬೇಯರ್‌ಸ್ಟೋ ತಮ್ಮ ಸ್ನೇಹಿತರೊಂದಿಗೆ ಗಾಲ್ಫ್ ಆಡುತ್ತಿದ್ದಾಗ ಗಾಯಗೊಂಡಿದ್ದರು. ಈ ಗಾಯ ಅವರಿಗೆ ದಕ್ಷಿಣ ಆಫ್ರಿಕಾದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೂ ಮುಂಚೆ ಆಗಿತ್ತು. ಗಾಲ್ಫ್ ಆಡುವ ಸಮಯದಲ್ಲಿ ಅವರು ಜಾರಿಬಿದ್ದಿದ್ದರು.
ಪಂಜಾಬ್ ಕಿಂಗ್ಸ್ ತಂಡವು ಬಿಸಿಸಿಐ ಮೂಲಕ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯೊಂದಿಗೆ ಹಲವಾರು ಬಾರಿ ಸಂಪರ್ಕ ಸಾಧಿಸಿ ಬೇಯರ್‌ಸ್ಟೋ ಅವರ ಗಾಯದ ಬಗ್ಗೆ ಮಾಹಿತಿ ಪಡೆಯಲು ಯತ್ನಿಸಿತು. ಈಗ ಇಸಿಬಿ ಬೇಯರ್‌ಸ್ಟೋ ಐಪಿಎಲ್‌ನಲ್ಲಿ ಆಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ತಾರಾ ಬ್ಯಾಟ್ಸ್‌ಮನ್ ಜಾನಿ ಬೇರ್‌ಸ್ಟೋ ಗಾಯಗೊಂಡಿದ್ದು, ಅವರ ಸ್ಥಾನವನ್ನು ಆಸ್ಟ್ರೇಲಿಯಾದ ಮ್ಯಾಥ್ಯೂ ಶಾರ್ಟ್ ಪಡೆಯಲಿದ್ದಾರೆ.