ಎಡಗೈ ಬ್ಯಾಟ್ಸ್‌ಮನ್ 2020ರ ಮಾರ್ಚ್‌ನಲ್ಲಿ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. 2007ರಲ್ಲಿ ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಂತರರಾಷ್ಟ್ರೀಯ ಪದಾರ್ಪಣೆ ಮಾಡಿದ್ದರು. 78 ಪಂದ್ಯಗಳ ವೃತ್ತಿಪರ ಜೀವನದಲ್ಲಿ ಅವರು ಒಟ್ಟು 1758 ರನ್ ಗಳಿಸಿದ್ದಾರೆ.
ತಮೀಮ್ ಈ ವರ್ಷದ ಜನವರಿಯಲ್ಲಿ ಈ ಸ್ವರೂಪದಿಂದ ವಿರಾಮ ಪಡೆದಿದ್ದರು. ಆ ಸಮಯದಲ್ಲಿ ಅವರು, ನಾನು ಟಿ-20 ಅಂತರರಾಷ್ಟ್ರೀಯ ಪಂದ್ಯಗಳಿಂದ 6 ತಿಂಗಳ ಕಾಲ ವಿರಾಮ ಪಡೆಯಲಿದ್ದೇನೆ ಎಂದು ಹೇಳಿದ್ದರು. ನನ್ನ ಸಂಪೂರ್ಣ ಗಮನ ಟೆಸ್ಟ್ ಮತ್ತು ಏಕದಿನ ಪಂದ್ಯಗಳ ಮೇಲಿರಲಿದೆ ಎಂದಿದ್ದರು.
ತಮೀಮ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಮಾಲಿಕೆಯಲ್ಲಿ ಪಂದ್ಯಶ್ರೇಷ್ಠ ಆಟಗಾರ ಎಂದು ಆಯ್ಕೆಯಾದರು. ಮೂರು ಪಂದ್ಯಗಳಲ್ಲಿ ಅವರು ಒಟ್ಟು 117 ರನ್ ಗಳಿಸಿದರು. ಇದರಲ್ಲಿ ಒಂದು ಅರ್ಧಶತಕವೂ ಸೇರಿದೆ.
15 ವರ್ಷಗಳ ವೃತ್ತಿಪರ ಜೀವನಕ್ಕೆ ತೆರೆ ಎಳೆದಿದ್ದಾರೆ. ಆದರೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುವರು.