ಹಿಂಡೆನ್‌ಬರ್ಗ್ ವರದಿ ಬಿಡುಗಡೆಯಾದ ನಂತರ, NSE ಫೆಬ್ರುವರಿ 6 ರಂದು, ಅದಾನಿ ಗುಂಪಿನ ಷೇರುಗಳಲ್ಲಿನ ಹೆಚ್ಚಿನ ಅಸ್ಥಿರತೆಯಿಂದಾಗಿ, ಮೊದಲ ಬಾರಿಗೆ ಅದಾನಿ ಎಂಟರ್‌ಪ್ರೈಸಸ್ ಅನ್ನು ಅಂಬುಜಾ ಸಿಮೆಂಟ್ಸ್ ಮತ್ತು ಅದಾನಿ ಪೋರ್ಟ್ಸ್‌ಗಳೊಂದಿಗೆ ಅಲ್ಪಾವಧಿ ASM ಗೆ ಒಳಪಡಿಸಿತ್ತು.
ಅಲ್ಪಾವಧಿ ಮತ್ತು ದೀರ್ಘಾವಧಿ ASM ಎಂಬುದು ಒಂದು ರೀತಿಯ ಮೇಲ್ವಿಚಾರಣೆಯಾಗಿದ್ದು, ಮಾರುಕಟ್ಟೆ ನಿಯಂತ್ರಕ ಸೆಬಿ ಮತ್ತು ಮಾರುಕಟ್ಟೆ ವಿನಿಮಯ ಕೇಂದ್ರಗಳಾದ BSE-NSEಗಳು ಹೆಚ್ಚುವರಿ ಮೇಲ್ವಿಚಾರಣೆಯಲ್ಲಿರಿಸಲಾಗಿರುವ ಷೇರುಗಳ ಮೇಲೆ ನಿಗಾ ವಹಿಸುತ್ತವೆ.
ASM ಚೌಕಟ್ಟದಡಿ ಷೇರುಗಳನ್ನು ಆಯ್ಕೆ ಮಾಡುವ ನಿಯತಾಂಕಗಳಲ್ಲಿ ಹೈ-ಲೋ ವ್ಯತ್ಯಾಸ, ಗ್ರಾಹಕ ಸಾಂದ್ರತೆ, ಬೆಲೆ ಬ್ಯಾಂಡ್ ಹಿಟ್‌ಗಳ ಸಂಖ್ಯೆ, ಕ್ಲೋಸ್ ಟು ಕ್ಲೋಸ್ ಬೆಲೆ ವ್ಯತ್ಯಾಸ ಮತ್ತು PE ಅನುಪಾತಗಳು ಸೇರಿವೆ.
BSE-NSEಗಳು ಅಡಾನಿ ಪವರ್ ಅನ್ನು ಎರಡನೇ ಬಾರಿಗೆ ಅಲ್ಪಾವಧಿಯ ASM ಚೌಕಟ್ಟಿನಲ್ಲಿ ಸೇರಿಸಿವೆ.