ಈ ಯುದ್ಧನೌಕೆಯು ರಾಡಾರ್‌ನಿಂದ ತಪ್ಪಿಸಿಕೊಳ್ಳುವ ವೈಶಿಷ್ಟ್ಯಗಳು, ಜಲಾಂತರ್ಗಾಮಿ ವಿರೋಧಿ ಟಾರ್ಪಿಡೋಗಳು ಮತ್ತು ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳನ್ನು ಒಳಗೊಂಡಿದೆ, ಇದು ಇದರ ಮಿಲಿಟರಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಐಎನ್ಎಸ್ ತುಶಿಲ್ ಹಿಂದೂ ಮಹಾಸಾಗರ ವಲಯದಲ್ಲಿ ಚೀನಾದ ಹೆಚ್ಚುತ್ತಿರುವ ಸೈನ್ಯದ ಉಪಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲಿದೆ.
ಐಎನ್ಎಸ್ ತುಶಿಲ್ 125 ಮೀಟರ್ ಉದ್ದವಿದ್ದು, 3,900 ಟನ್ ತೂಕ ಹೊಂದಿದೆ. ಇದು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಮತ್ತು ಇತರ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇದನ್ನು ಭಾರತ ಮತ್ತು ರಷ್ಯಾ ನಡುವಿನ ದೀರ್ಘಕಾಲೀನ ಕಾರ್ಯತಂತ್ರದ ಸಂಬಂಧದ ಸಂಕೇತವೆಂದು ಬಣ್ಣಿಸಿದರು ಮತ್ತು ಸಹಯೋಗದ ಪ್ರಯತ್ನಗಳನ್ನು ಶ್ಲಾಘಿಸಿದರು.
ಐಎನ್ಎಸ್ ತುಶಿಲ್ ಭಾರತ-ರಷ್ಯಾ ರಕ್ಷಣಾ ಸಹಭಾಗಿತ್ವದ ಭಾಗವಾಗಿದೆ. ಈ ಸಹಭಾಗಿತ್ವದ ಅಡಿಯಲ್ಲಿ ನಾಲ್ಕು ಮಾರ್ಗದರ್ಶಿತ ಕ್ಷಿಪಣಿ ಯುದ್ಧನೌಕೆಗಳನ್ನು ನಿರ್ಮಿಸಲಾಗುತ್ತಿದೆ. ಅವುಗಳಲ್ಲಿ ಎರಡು ರಷ್ಯಾದಲ್ಲಿ ಮತ್ತು ಉಳಿದ ಎರಡು ಭಾರತದಲ್ಲಿ ನಿರ್ಮಾಣವಾಗಲಿವೆ.
ರಷ್ಯಾ ನಿರ್ಮಿತ ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆ INS ತುಶಿಲ್ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ. ಇದು ಹಿಂದೂ ಮಹಾಸಾಗರದಲ್ಲಿ ಭಾರತದ ಕಾರ್ಯತಂತ್ರ ಮತ್ತು ಕಾರ್ಯಾಚರಣಾ ಸಾಮರ್ಥ್ಯವನ್ನು ಬಲಪಡಿಸಲಿದೆ.
ರಷ್ಯಾದಿಂದ ಪಡೆದ ಅತ್ಯಾಧುನಿಕ ಗೈಡೆಡ್ ಮಿಸೈಲ್ ಯುದ್ಧನೌಕೆ INS ತುಷಿಲ್ ಭಾರತೀಯ ನೌಕಾಪಡೆಗೆ ಸೇರ್ಪಡೆ.