ಏಪ್ರಿಲ್ 2, 1969 ರಂದು ಮುಂಬೈನಲ್ಲಿ ಅಜಯ್ ದೇವಗನ್ ಅವರ ಜನನವಾಯಿತು. ಪ್ರಸಿದ್ಧ ನಿರ್ದೇಶಕ ವೀರೂ ದೇವಗನ್ ಅವರ ಪುತ್ರರಾದ ಅವರನ್ನು ಮನೆಯವರು ಪ್ರೀತಿಯಿಂದ ರಾಜು ಎಂದು ಕರೆಯುತ್ತಿದ್ದರು. ಅವರು ಮೊದಲು ಸಿಲ್ವರ್ ಬೀಚ್ ಹೈ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದರು. ನಂತರ ಮಿಠಿಬಾಯಿ ಕಾಲೇಜಿನಲ್ಲಿ ಸೇರಿಕೊಂಡರು.
ಇಂದು ಅಜಯ್ ಉದ್ಯಮದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. 1991ರ "ಫೂಲ್ ಆಂಡ್ ಕಾಂಟೆ" ಚಿತ್ರದಿಂದ ಆರಂಭವಾದ ಅಜಯ್‌ರ ಪ್ರಯಾಣ ಇಂದಿಗೂ "ದೃಶ್ಯಂ 2", "ಭೋಲಾ", "ಮೈದಾನ", "ಸಿಂಗಂ ಅಗೈನ್" ಮುಂತಾದ ಚಿತ್ರಗಳ ಮೂಲಕ ಮುಂದುವರಿದಿದೆ.
ಒಂದು ಕಾಲವಿತ್ತು, ಇವರು ನಟನಾಗುತ್ತೇನೆ ಎಂದಾಗ, ಪಕ್ಕದಲ್ಲಿದ್ದ ಸ್ನೇಹಿತರು ಜೋರಾಗಿ ನಕ್ಕರು. ಈ ಕಪ್ಪು ಮತ್ತು ಸಾಮಾನ್ಯ ಮುಖದ ಹುಡುಗ ಹೀರೋ ಹೇಗೆ ಆಗುತ್ತಾನೆ ಎಂದು ಎಲ್ಲರೂ ವ್ಯಂಗ್ಯ ಮಾಡುತ್ತಿದ್ದರು.
ಗೆಳೆಯರು ಹೇಳುತ್ತಿದ್ದರು - ನೀನು ಹೀರೋ ಆಗ್ತಿಯಾ? 572 ಕೋಟಿ ನೆಟ್ ವರ್ತ್, ಖಾಸಗಿ ಜೆಟ್ ಖರೀದಿಸಿದ ಮೊದಲ ನಟ.